ಯಾವುದೇ ಅಪ್ಲಿಕೇಶನ್ ಅಗತ್ಯವಿಲ್ಲ. ಗೂಗಲ್ ಸಹಾಯದಿಂದ ಕಿಬ್ಲಾವನ್ನು ಕಂಡುಹಿಡಿಯಬಹುದು..!

ಐದು ಹೊತ್ತಿನ ನಮಾಝ್ ಮುಸ್ಲಿಂಗಳ ಪಾಲಿಗೆ ಬಹಳ ಮುಖ್ಯವಾದುದು. ಈ ಎಲ್ಲಾ ಪ್ರಾರ್ಥನೆಗಳನ್ನು ಕಾಬಾದ ಬಾಗಕ್ಕೆ ತಿರುಗಿ ನಿರ್ವಹಿಸಬೇಕು. ಇದನ್ನು ಕಿಬ್ಲಾ ಎಂದು ಕರೆಯಲಾಗುತ್ತದೆ. ಒಬ್ಬರು ಎಲ್ಲಿ ನಮಾಝ್ ನಿರ್ವಹಿಸುವುದಾದರೂ ಕಿಬ್ಲಾವನ್ನು ತಿಳಿದುಕೊಳ್ಳುವುದು ಕಡ್ಡಾಯವಾಗಿದೆ. ಆದರೆ ಎಲ್ಲಾ ಕಡೆಗಳಲ್ಲೂ ಕಿಬ್ಲಾವನ್ನು ಹುಡುಕುವುದು ಸ್ವಲ್ಪ ಕಷ್ಟಕರವಾದ ಸಂಗತಿ.
ಆದರೆ ಇಂದು ತಂತ್ರಜ್ಞಾನವು ತುಂಬಾ ಮುಂದುವರೆದಿದೆ. ಆದ್ದರಿಂದ ನಾವು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಕಿಬ್ಲಾವನ್ನು ಕಂಡು ಹಿಡಿಯಬಹುದು. ಇದಕ್ಕೆ ಅಪ್ಲಿಕೇಶನ್ ಅಗತ್ಯವಿಲ್ಲ. ಬದಲಾಗಿ, ನಿಮ್ಮ ಫೋನ್‌ನಲ್ಲಿ Google Chrome ತೆರೆಯಿರಿ.
 ನಂತರ ಕಿಬ್ಲಾ ಫೈಂಡರ್ ಎಂದು ಸೆರ್ಚ್ ಮಾಡಿರಿ ಅಥವಾ https://qiblafinder.withgoogle.com
 ಎಂಬ ಲಿಂಕ್ ನಲ್ಲಿ ಹುಡುಕಿ. ಕೂಡಲೇ ಅಲ್ಲಿ ಕೇಳಲ್ಪಡುವ ಓಪ್ಶನ್ಸ್ ಗಳಿಗೆ ಉತ್ತರಿಸಿ. ನಂತರ ಕಿಬ್ಲಾ ನಿರ್ದೇಶನವು ನಿಖರವಾಗಿ ತೋರಿಸುತ್ತದೆ. ಫೋನ್ ಅನ್ನು ಮುಖಾಮುಖಿಯಾಗಿ ಹಿಡಿದುಕೊಳ್ಳಿ.
ಇನ್ನು ಒಂದು ನಕ್ಷೆಯನ್ನು ತೋರಿಸಲ್ಪಟ್ಟರೆ ನಿಮ್ಮ Google Chrome ಸೆಟ್ಟಿಂಗ್ಸ್ ನ site settings ಎಂಬಲ್ಲಿ ಕ್ಯಾಮೆರಾವನ್ನು allow ಮಾಡಿರಿ.
ಈ ಕುರಿತು ಇನ್ನಷ್ಟು ತಿಳಿದುಕೊಳ್ಳಲು ವೀಡಿಯೊ ನೋಡಿ.
ನಿಮಗೆ ಈ ಮಾಹಿತಿ ಇಷ್ಟಪಟ್ಟಿದ್ದರೆ ದಯವಿಟ್ಟು ಇದನ್ನು ಇತರರೊಂದಿಗೆ ಹಂಚಿಕೊಳ್ಳಿ. ನಮ್ಮ ವಾಟ್ಸಾಪ್ ಗುಂಪಿನಲ್ಲಿ ಸೇರಲು ಮರೆಯಬೇಡಿ.
Previous Post Next Post