ಅಗತ್ಯ ವಸ್ತುಗಳ ಖರೀದಿ ಸಮಯವನ್ನು ಹೆಚ್ಚಿಸಲು ಮತ್ತು ಜನಪ್ರತಿನಿಧಿಗಳಿಗೆ ಜವಾಬ್ದಾರಿ ನೀಡಲು ಎಸ್.ವೈ.ಎಸ್.ಆಗ್ರಹ

*ಅಗತ್ಯ ವಸ್ತುಗಳ ಖರೀದಿ ಸಮಯವನ್ನು ಹೆಚ್ಚಿಸಲು ಮತ್ತು ಜನಪ್ರತಿನಿಧಿಗಳಿಗೆ ಜವಾಬ್ದಾರಿ ನೀಡಲು ಎಸ್.ವೈ.ಎಸ್.ಆಗ್ರಹ*
~~~~~~~~~~~~~~~~~~~~~
*ಕೋವಿಡ್ ನಿಯಂತ್ರಣ ಕ್ಕಾಗಿ ಕರ್ನಾಟಕ ಸರ್ಕಾರ ಪ್ರಕಟಿಸಿದ ಲಾಕ್‌ಡೌನ್‌ನ ನಿಯಮಗಳ ಪ್ರಕಾರ ಬೆಳಗ್ಗೆ ಆರು ಗಂಟೆಯಿಂದ ಒಂಬತ್ತು ಗಂಟೆಯ ತನಕ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಸಮಯಾವಕಾಶ ನೀಡಲಾಗಿದ್ದು ಈ‌ ಮೂಲಕ ಉಂಟಾಗುತ್ತಿರುವ ನೂಕುನುಗ್ಗಲು ಮತ್ತು ಪರಿಭ್ರಾಂತಿಗಳು ಜನರನ್ನು ಸಾಮಾಜಿಕ ಅಂತರ ಕಾಪಾಡಲು ಸಾಧ್ಯವಾಗದ ಮಟ್ಟಕ್ಕೆ ಕೊಂಡೊಯ್ಯುತ್ತಿವೆ. ಇದರಿಂದಾಗಿ ಎಲ್ಲ ಪ್ರದೇಶಗಳಲ್ಲಿ ವ್ಯಾಪಕವಾಗಿ ಕೊರೋನ ಹರಡುವ ಭೀತಿ ಸೃಷ್ಟಿಯಾಗುತ್ತಿದೆ.ಆದ್ದರಿಂದ ಅವಶ್ಯ ವಸ್ತುಗಳ ಖರೀದಿಯ ಸಮಯವನ್ನು ಬೆಳಗ್ಗೆ ಏಳರಿಂದ ಹನ್ನೆರಡು ಗಂಟೆಯ ತನಕ ನಿಗದಿಪಡಿಸಬೇಕು. ಅಂಗಡಿಗಳಲ್ಲಿನ ವಿಪರೀತ ಜನಜಂಗುಳಿ ನಿಯಂತ್ರಣ ಮಾಡಲು ಪೋಲೀಸರು ಬೆತ್ತಗಳೊಂದಿಗೆ ಬರುವಾಗ ಇನ್ನಷ್ಟು ಗೊಂದಲ ನಿರ್ಮಾಣವಾಗುತ್ತದೆ.* *ಆದಕಾರಣ ನಿಯಂತ್ರಣದ ಜವಾಬ್ದಾರಿಯನ್ನು ಕೇವಲ ಪೋಲೀಸರಿಗೆ ವಹಿಸದೆ ಪಂಚಾಯತ್ ಸದಸ್ಯರು, ಮುನ್ಸಿಪಲ್ ಕೌನ್ಸಿಲರ್‌ಗಳು, ಕಾರ್ಪೊರೇಟರ್‌ಗಳು ಮುಂತಾದ ಸ್ಥಳೀಯಾಡಳಿತ ಪ್ರತಿನಿಧಿಗಳಿಗೂ ವಹಿಸಿ ವಹಿಸಿಕೊಡಬೇಕು.* 
*ಇಂತಹ ಜನಪ್ರತಿನಿಧಿಗಳು ಸರಕಾರದ ಆಡಳಿತ ಯಂತ್ರದ ಭಾಗವಾಗಿದ್ದು ನಾಡು ಕಠಿಣ ಪರಿಸ್ಥಿತಿಯ ಮೂಲಕ ಹಾದು ಹೋಗುತ್ತಿರುವಾಗಲೂ ತಮಗೆ ಯಾವುದೇ ಸಂಬಂಧವಿಲ್ಲ ಎಂಬಂತೆ ತೆಪ್ಪಗೆ ಕುಳಿತುಕೊಂಡಿರುವುದು ಅಕ್ಷಮ್ಯ.* 
*ಕೊರೋನಾ ಕಾಲದ ಯಾವುದೇ ಸೇವಾಕಾರ್ಯಗಳಲ್ಲಿ ಇಂಥ ಜನಪ್ರತಿನಿಧಿಗಳನ್ನು ಹೆಚ್ಚಾಗಿ ಕಾಣಸಿಗುವುದಿಲ್ಲ. ಕೆಲವು ಸಾಮಾಜಿಕ ಸಂಘಟನೆಗಳು ಮಾತ್ರ ಮೈಕೈ ಮರೆತು ಸೇವಾ ಸಜ್ಜವಾಗಿವೆ. ಜನಪ್ರತಿನಿಧಿಗಳನ್ನು ಈ ಸಂದರ್ಭಗಳಲ್ಲಿ ಸಮರ್ಪಕವಾಗಿ ಬಳಸಿಕೊಳ್ಳಲು ಸರಕಾರ ಕೂಡ ವಿಫಲವಾಗಿದೆ.* *ಅದು ಸರಕಾರದ ನಿಷ್ಕ್ರಿಯತ್ವ ಮತ್ತು ಬೇಜವಾಬ್ಧಾರಿಯನ್ನು ಎತ್ತಿ ತೋರಿಸುತ್ತದೆ. ಎಂದು ಸುನ್ನೀ ಯುವಜನ ಸಂಘ (ಎಸ್.ವೈ.ಎಸ್.) ಕರ್ನಾಟಕ ರಾಜ್ಯ ಸಮಿತಿಯು ಅಭಿಪ್ರಾಯಪಟ್ಟಿದೆ.*

*ಜನಪ್ರತಿನಿಧಿಗಳು‌ ತಮ್ಮ ಕೆಲಸ ಏನಿದ್ದರೂ ರಾಜಕೀಯ ಮಾಡುವುದಕ್ಕೆ ಸೀಮಿತ ಎಂದು ಬಗೆದಂತಿದೆ. ತಮ್ಮನ್ನು ಆರಿಸಿ ಕಳಿಸಿದ ಜನತೆಯೊಂದಿಗೆ ಯಾವುದೇ ಹೊಣೆಗಾರಿಕೆಗಳು‌ ಇಲ್ಲದ ರೀತಿಯಲ್ಲಿ ಅವರ ವರ್ತನೆ ಖಂಡನೀಯ.
*ಈ ನಿಟ್ಟಿನಲ್ಲಿ ಸರಕಾರವು ತಕ್ಷಣ ‌ಜಿಲ್ಲಾಧಿಕಾರಿಗಳ ಮೂಲಕ ಸ್ಪಷ್ಟವಾದ ಆದೇಶ ಜಾರಿಮಾಡಿ ಜನಪ್ರತಿನಿಧಿಗಳಿಗೆ ಸಾಕಷ್ಟು ಜವಾಬ್ದಾರಿ ಕೊಟ್ಟು ಪ್ರಸಕ್ತ ಭಯಾನಕ ಸನ್ನಿವೇಶವನ್ನು ನಿಭಾಯಿಸಲು ಜನಸಾಮಾನ್ಯರಿಗೆ ನೆರವಾಗಬೇಕು.* *ಸರಕಾರದ ಕಠಿಣ ಕಾನೂನುಗಳು ಮತ್ತು ಪೋಲೀಸರ ಲಾಠಿಯಿಂದ ಮಾತ್ರ ಈ ಮಾರಕ ವ್ಯಾಧಿಯನ್ನು ತೊಲಗಿಸಬಹುದು ಎಂಬ ಭಾವನೆ ನಿರರ್ಥಕ ಹಾಗೂ ಅವೈಜ್ಞಾನಿಕ.*

*ಇದಕ್ಕೆಲ್ಲ ತಕ್ಷಣ ಪರಿಹಾರ ಕಾಣಬೇಕು. ಸರಕಾರ ತಕ್ಷಣ ಕೋವಿಡ್ ಕಾಲದ ವಿಶೇಷ ಪ್ಯಾಕೇಜ್ ಒಂದನ್ನು ಘೋಷಣೆ ಮಾಡಿ ಜನರ ಸಂಕಷ್ಟಕ್ಕೆ ಅಲ್ಪಮಟ್ಟದ ಸಹಾಯವನ್ನಾದರೂ ಒದಗಿಸಬೇಕೆಂದು* *ಸಂಘಟನೆಯ ರಾಜ್ಯಾಧ್ಯಕ್ಷ ಪಿ.ಎಂ.ಉಸ್ಮಾನ್ ಸ‌ಅದಿ ಪಟ್ಟೋರಿ ಹಾಗೂ ಪ್ರಧಾನ ಕಾರ್ಯದರ್ಶಿ ಡಾ.ಎಮ್ಮೆಸ್ಸೆಂ. ಝೈನೀ ಕಾಮಿಲ್ ಅವರು ರಾಜ್ಯದ ಮುಖ್ಯಮಂತ್ರಿಯವರಿಗೆ ನೀಡಿದ ಮನವಿಯಲ್ಲಿ ಅಪೇಕ್ಷೆ ಪಟ್ಟಿದ್ದಾರೆ*


🪀ಜೋಬ್ ಗುಂಪಿನಲ್ಲಿ ಸೇರಿ👇
ಸಾಧ್ಯವಾದಷ್ಟು ಹಂಚಿಕೊಳ್ಳಿ.

Previous Post Next Post