ರಿಯಾಯಿತಿ ಓಫರ್ ಗೆ ಮರುಳಾಗಿ ಆನ್‌ಲೈನ್‌ನಲ್ಲಿ ಐಫೋನ್ ಗಾಗಿ ಓರ್ಡರ್ ; ಪೆಟ್ಟಿಗೆಯನ್ನು ತೆರೆದಾಗ ಸಿಕ್ಕಿದ್ದು ಐಫೋನ್ ಆಕಾರದ ಕೋಫೀ ಟೇಬಲ್‌

 ದೀರ್ಘಕಾಲದವರೆಗೆ ಖರೀದಿಸಲು ಬಯಸುತ್ತಿರುವ ಐಟಂ ಆಘಾತಕಾರಿ ಬೆಲೆಗೆ ಲಭ್ಯವಿದ್ದರೆ, ಯಾರಾದರೂ ಎರಡನೇ ಆಲೋಚನೆಯಿಲ್ಲದೆ ಅದನ್ನು ಪಡೆಯಲು ಪ್ರಯತ್ನಿಸುತ್ತಾರೆ. ಜನರನ್ನು ಆಕರ್ಷಿಸಲು ಆನ್‌ಲೈನ್ ಶಾಪಿಂಗ್ ಸೈಟ್‌ಗಳು ತಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ಇಂತಹ ಕೊಡುಗೆಗಳನ್ನು ಇಟ್ಟು ಮಾರಾಟ ಮಾಡುತ್ತವೆ. ಹೀಗಾಗಿ, ಆ ಮೂಲಕ ಮೋಸಕ್ಕೊಳಗಾಗುವವರ ಸಂಖ್ಯೆಯೂ ಕಡಿಮೆಯಲ್ಲ.

 ಶಾಪಿಂಗ್ ಸೈಟ್‌ಗಳಿಗೆ ಹೋಗಿ ಖರೀದಿಸಲು ಉದ್ದೇಶಿಸುವ ಐಟಮನ್ನು ಸೆಲೆಕ್ಟ್ ಮಾಡಿ ಅದರ ವಿವರಣೆಗಳು ಮತ್ತು ವಿಮರ್ಶೆಗಳನ್ನು ಅರ್ಥೈಸಿ ನಂತರ ಮೌಲ್ಯಮಾಪನ ಮಾಡಿ ಉತ್ಪನ್ನಗಳನ್ನು ಆಯ್ಕೆ ಮಾಡುವುದಾಗಿದೆ ಸರಿಯಾದ ವಿಧಾನ. ಆದರೆ ನಿರೀಕ್ಷಿಸದ ರಿಯಾಯತಿಯಲ್ಲಿ ವಸ್ತುಗಳು ಸಿಗುವಾಗ ನಾವು ಅವಗಣಿಸುವುದು ಸಾಧಾರಣ. ಅಂತಹ ತಪ್ಪು ಮಾಡುವಲ್ಲಿ ಥಾಯ್ಲಾಂಡ್ ನ ವ್ಯಕ್ತಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ತನಗುಂಟಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ.

 ಆನ್‌ಲೈನ್‌ನಲ್ಲಿ ಆಪಲ್ ಐಫೋನ್‌ನ ಬೆಲೆಯಲ್ಲಿ ಭಾರಿ ಕುಸಿತ ಕಂಡು ಥಾಯ್ಲಾಂಡ್‌ನ ಹದಿಹರೆಯದವನು ಮರುಳಾಗಿ ಓರ್ಡರ್ ಮಾಡಿದ. ಆದರೆ ಡೆಲಿವರಿ ಹುಡುಗ ಆತನಿಗೆ ತಂದು ಕೊಟ್ಟಿದ್ದು ದೊಡ್ಡ ಕಾರ್ಟೂನ್ ಪೆಟ್ಟಿಗೆಯೊಂದನ್ನು.
 ಮೊದಲ ನೋಟದಲ್ಲೇ ಆಶ್ಚರ್ಯಗೊಂಡ ಆತ ಆಶ್ಚರ್ಯದ ನಿರೀಕ್ಷೆಯಲ್ಲಿಯೇ ಅದನ್ನು ತೆರೆದಿದ್ದಾನೆ ಮತ್ತು 6.7-ಇಂಚಿನ ಐಫೋನ್ ಬದಲಿಗೆ ಟೇಬಲ್ ಗಾತ್ರದ ಐಫೋನ್ ಅನ್ನು ಕಂಡು ಹೌಹಾರಿದ್ದಾನೆ. ಅದೊಂದು ಐಫೋನ್ ಆಕಾರದ ಕಾಫಿ ಟೇಬಲ್ ಆಗಿದ್ದು, ಹಿಂಭಾಗದಲ್ಲಿ ನಾಲ್ಕು ಕಾಲುಗಳಿತ್ತು.


 ಈ ವಿಚಿತ್ರ ಘಟನೆಗೆ ಡೆಲಿವರಿ ಬಾಯ್ ಅಥವಾ ಶಾಪಿಂಗ್ ಸೈಟ್ ಕಾರಣವಲ್ಲ. ಉತ್ಪನ್ನದ ವಿವರಣೆಯನ್ನು ನೋಡದೆ ರಿಯಾಯಿತಿಗೆ ಮರುಳಾದ ಹದಿಹರೆಯದವನು ಮಾತ್ರ.
 ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಐಫೋನ್ ಲಭಿಸಿದ ಅನುಭವವನ್ನು ಚಿತ್ರಗಳೊಂದಿಗೆ ಹಂಚಿಕೊಂಡ ಕೂಡಲೇ ವಿಷಯ ಜಗಜ್ಜಾಹೀರಯಿತು.

Previous Post Next Post