ಇನ್ನೂ ತಮ್ಮ ಆಧಾರ್ ಕಾರ್ಡನ್ನು ಪಾನ್ ಕಾರ್ಡ್‌ಗೆ ಲಿಂಕ್ ಮಾಡಿಲ್ಲವೇ? ಇಲ್ಲದಿದ್ದರೆ ತಾವು ಆಘಾತಕ್ಕೊಳಗಾಗುತ್ತೀರಿ ಗ್ಯಾರಂಟಿ!

ಶಾಶ್ವತ ಖಾತೆ ಸಂಖ್ಯೆ (ಪಾನ್) ಕಾರ್ಡ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ಕೊನೆಯ ದಿನವನ್ನು ಮತ್ತೆ ವಿಸ್ತರಿಸಲಾಗಿದೆ. ಪ್ಯಾನ್ ಕಾರ್ಡ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ಆದಾಯ ತೆರಿಗೆ ಇಲಾಖೆ ನೀಡಿದ ಕೊನೆಯ ದಿನಾಂಕ ಜೂನ್ 30 ರವರೆಗೆ ಮುಂದುವರಿಯುತ್ತದೆ. ಜುಲೈ 1 ರ ನಂತರ ಆಧಾರ್‌ಗೆ ಲಿಂಕ್ ಮಾಡದ ಪಾನ್ ಕಾರ್ಡ್‌ಗಳು ಅಮಾನ್ಯವಾಗುತ್ತವೆ ಮತ್ತು ಆದಾಯ ತೆರಿಗೆ ಕಾಯ್ದೆಯಡಿ ದಂಡವನ್ನು ಎದುರಿಸಬೇಕಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಇದು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 272 ಬಿ ಅಡಿಯಲ್ಲಿ 10,000 ರೂ.ಗಳ ದಂಡ ವಿಧಿಸಬೇಕಾದ ಅಪರಾಧವಾಗಿದೆ.
 ದೊಡ್ಡ ಒಂದು ಸಮಸ್ಯೆಯೆಂದರೆ ಅನೇಕ ಜನರಿಗೆ ಪಾನ್ ಕಾರ್ಡ್ ಅನ್ನು ಆಧಾರ್‌ನೊಂದಿಗೆ ಹೇಗೆ ಲಿಂಕ್ ಮಾಡುವುದು ಎಂದು ತಿಳಿದಿಲ್ಲ ಎಂಬುವುದು. ಪ್ಯಾನ್ ಕಾರ್ಡ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ಸರ್ಕಾರಿ ಕಚೇರಿಗಳಿಗೆ ಹೋಗಬೇಕಾಗಿಲ್ಲ. ಪಾನ್ ಕಾರ್ಡ್ - ಆಧಾರ್ ಸಂಪರ್ಕವನ್ನು ಕೇವಲ 5 ನಿಮಿಷಗಳಲ್ಲಿ ಆನ್‌ಲೈನ್‌ ಮೂಲಕ ಮಾಡಬಹುದು. ಎರಡೂ ಕಾರ್ಡ್‌ಗಳಲ್ಲಿನ ಸಂಖ್ಯೆಗಳು ನಿಖರವಾಗಿ ತಿಳಿದಿರಬೇಕು.


 ನಿಮ್ಮ ಪಾನ್ ಕಾರ್ಡ್ ಆಧಾರ್‌ಗೆ ಸಂಪರ್ಕಗೊಂಡಿದೆಯೇ ಎಂದು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ...
 https://www1.incometaxindiaefiling.gov.in/e-FilingGS/Services/AadhaarPreloginStatus.html

 ಆದಾಯ ತೆರಿಗೆ ಇಲಾಖೆ ಇ-ಫೈಲಿಂಗ್ ಪೋರ್ಟಲ್ ಅನ್ನು ತೆರೆಯಲು ಇಲ್ಲಿ ಕ್ಲಿಕ್ ಮಾಡಿ...
 https://www1.incometaxindiaefiling.gov.in/e-FilingGS/Services/LinkAadhaarHome.html

 ವೆಬ್‌ಪುಟದ ಎಡಭಾಗದಲ್ಲಿರುವ ತ್ವರಿತ ಲಿಂಕ್‌ನಿಂದ ಲಿಂಕ್ ಆಧಾರ್ ಅನ್ನು ಕ್ಲಿಕ್ ಮಾಡಿ.
 ನಂತರ ತೆರೆಯುವ ಲಿಂಕ್‌ನಲ್ಲಿ ಪಾನ್ ಸಂಖ್ಯೆ, ಆಧಾರ್ ವಿವರಗಳು, ಹೆಸರು ಇತ್ಯಾದಿ ಎಲ್ಲಾ ಮಾಹಿತಿಗಳನ್ನು ನಮೂದಿಸಿ.
 'ನನ್ನ ಆಧಾರ್ ವಿವರಗಳನ್ನು
UIDII ಉಪಯೋಗಿಸಿ ಮೌಲ್ಯೀಕರಿಸಲು ನಾನು ಒಪ್ಪುತ್ತೇನೆ' ಎಂದು ಬರೆದಿರುವ ಬೋಕ್ಸ್ ಟಿಕ್ ಮಾಡಿ.

 ಕ್ಯಾಪ್ಚಾ ಕೋಡ್ ನಮೂದಿಸಿ. ನಂತರ ಆಧಾರ್ ಲಿಂಕ್ ಅನ್ನು ಕ್ಲಿಕ್ ಮಾಡಿ ಸಬ್ಮಿಟ್ ಬಟನನ್ನು ಒತ್ತಿರಿ.


Previous Post Next Post