ಯೂಟ್ಯೂಬರ್‌ಗಳಿಗೆ ಸಂತಸ ಸುದ್ದಿ; ಈ ಹೊಸ ಅಪ್ಡೇಶನ್ ನಿಮಗೆ ಇಷ್ಟಪಡಬಹುದು

ಇಂಟರ್ನೆಟ್ ಬಳಕೆದಾರರ ಸಂಖ್ಯೆ ಹೆಚ್ಚಾದಂತೆ, ಯೂಟ್ಯೂಬ್‌ನಲ್ಲಿ ವೀಡಿಯೊಗಳನ್ನು ನೋಡುವ ಜನರ ಸಂಖ್ಯೆಯೂ ಹೆಚ್ಚಾಗಿದೆ. ಯೂಟ್ಯೂಬ್‌ನಲ್ಲಿ ವ್ಲಾಗ್‌ಗಳು ಮತ್ತು ಇತರ ವೀಡಿಯೊಗಳನ್ನು ಅಪ್‌ಲೋಡ್ ಮಾಡುವ, ಕಮೆಂಟ್ ರಚನೆಕಾರರ ಸಂಖ್ಯೆಯೂ ಹೆಚ್ಚಾಗಿದೆ. ಆದರೆ ಯೂಟ್ಯೂಬ್‌ಗಾಗಿ ವೀಡಿಯೊಗಳನ್ನು ತಯಾರಿಸುವ ಹಾಗೂ ಟ್ರೇಲರ್‌ಗಳು ಮತ್ತು ಹಾಡುಗಳನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡುವವರನ್ನು ಅತಿಯಾಗಿ ಸಂಕಷ್ಟಕ್ಕೀಡು ಮಾಡುವ ಸಂಗತಿಯಾಗಿದೆ 'ಅನ್ಲೈಕ್ ಬಟನ್' ಎಂಬುವುದು.

 ಅನೇಕ ವೀಡಿಯೊ ರಚನೆಕಾರರು ಲೈಕ್ ಗಿಂತ ಹೆಚ್ಚಾಗಿ ಡಿಸ್ಲೈಕ್ ಪಡೆಯುವುದನ್ನು ದುಃಸ್ವಪ್ನವಾಗಿ ಕಾಣುತ್ತಾರೆ. ಇಂತಹ ಡಿಸ್ಲೈಕ್ ಅಭಿಯಾನಗಳು ಕೆಲವೊಂದು ಜನರನ್ನು ಗುರಿಯಾಗಿಸಿ ಅವಾಗವಾಗ ನಡೆಯುತ್ತಿರುತ್ತವೆ. ಲೈಕ್‌ಗಳಿಗಿಂತ ಹೆಚ್ಚಾಗಿ ಡಿಸ್ಲೈಕ್ ಗಳನ್ನು ಪಡೆದುಕೊಂಡೇ ಅನೇಕ ಯೂಟ್ಯೂಬ್ ಚಾನೆಲ್‌ಗಳು ರೆಕಾರ್ಡ್ ಮಾಡಿವೆ.
ಇದೀಗ ಹೊಸ ವೈಶಿಷ್ಟ್ಯತೆಗಳೊಂದಿಗೆ ಕಮೆಂಟ್ ರಚನಾಕಾರರನ್ನು ಆನಂದಿಸಲು ಯೂಟ್ಯೂಬ್ ಸಿದ್ಧವಾಗಿದೆ. ಹೊಸ ವೈಶಿಷ್ಟ್ಯತೆಯೆಂದರೆ ವೀಡಿಯೊ ಎಷ್ಟು ಡಿಸ್ಲೈಕ್ ಗಳನ್ನು ಪಡೆದಿದೆ ಎಂಬುದನ್ನು ಸಾರ್ವಜನಿಕರಿಗೆ ನೋಡಲು ಸಾಧ್ಯವಿಲ್ಲ. ಆದರೆ ಯೂಟ್ಯೂಬ್ ಸ್ಟುಡಿಯೋದಲ್ಲಿ ಅದು ಎಷ್ಟು ಡಿಸ್ಲೈಕ್ ಗಳನ್ನು ಪಡೆದಿದೆ ಎಂದು ನೋಡಬಹುದು. ವೀಡಿಯೊವನ್ನು ವೀಕ್ಷಿಸುವವರಿಗೆ ಡಿಸ್ಲೈಕ್ ಮಾಡಲು ಅವಕಾಶವು ಇದ್ದೇ ಇರುತ್ತದೆ. ಹೊಸ ವೈಶಿಷ್ಟ್ಯತೆಯನ್ನು ಪ್ರಸ್ತುತ ಪರೀಕ್ಷಿಸುವ ಸಲುವಾಗಿ ಜಾರಿಗೊಳಿಸಲಾಗಿದೆ.

ಆದರೆ ಹೊಸ ವೈಶಿಷ್ಟ್ಯತೆಯ ಬಗ್ಗೆ ಆಕ್ಷೇಪಣೆಗಳು ಜನರೆಡೆಯಲ್ಲಿ ಹೆಚ್ಚುತ್ತಿವೆ. ಈ ಹೊಸ ವೈಶಿಷ್ಟ್ಯತೆಯು ಜನರ ನೈಜ ಅಭಿಪ್ರಾಯವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬ ಆತಂಕವನ್ನು ಎತ್ತಿ ಹಿಡಿಯುತ್ತಿದೆ.
Previous Post Next Post